

Poornima Kashyap
ಪೂರ್ಣಿಮಾ ಮಾಗಡಿ ಹತ್ತಿರದ ಕುದೂರಿನವರು. ವೃತ್ತಿಯಲ್ಲಿ Software ಇಂಜಿನಿಯರ್, ಹವ್ಯಾಸಿ ಬರಹಗಾರ್ತಿ. ಪತಿ ಸುಬ್ರಹ್ಮಣ್ಯ ಮತ್ತು ಅವಳಿ ಮಕ್ಕಳು ಅರ್ಣವ್ -ಅವನಿ . 25 ವರ್ಷಗಳಿಂದ ಅಮೆರಿಕ ವಾಸ. ಸ್ಥಳೀಯ ಕನ್ನಡ ಸಂಘ, ಕನ್ನಡ ಶಾಲೆಗಳಲ್ಲಿ ಸ್ವಯಂಸೇವಕಿ . ಮಾತೃಭಾಷೆಯ ಬಗ್ಗೆ ಸಹಜ ಅಭಿಮಾನ, ಆಸಕ್ತಿ . ಲಲಿತಕಲೆಗಳು ನೆಚ್ಚು , ಪುಸ್ತಕಗಳು ಅಚ್ಚುಮೆಚ್ಚು . ಅಕ್ಷರಮೋಹಿ , ತೋಚಿದ್ದು ಗೀಚುವ ಹವ್ಯಾಸವಿದೆ . ಕೆಲವು ಕವನಗಳು, ಲೇಖನಗಳು ಜಾಲತಾಣ ಮತ್ತು ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟಕಗಳ ಓದು, ರಚನೆ ಮತ್ತು ಅಭಿನಯದಲ್ಲಿ ಆಸಕ್ತಿ. ಮಕ್ಕಳನಾಟಕಗಳ ಕುರಿತು ವಿಶೇಷ ವ್ಯಾಮೋಹ. ಸಾಹಿತ್ಯ ಪತ್ರಿಕೆ ಮತ್ತು ಪುಸ್ತಕಗಳ ಸಂಪಾದಕತ್ವ , ಸಾಹಿತ್ಯೋತ್ಸವಗಳ ಆಯೋಜನೆ ಮತ್ತು ಉಸ್ತುವಾರಿಯ ಅನುಭವವಿದೆ. ಕನ್ನಡ ಸಾಹಿತ್ಯ ರಂಗದ ಕಾರ್ಯಕಾರಿ ಸಮಿತಿಯಲ್ಲೊಂದಿಷ್ಟು ಅಳಿಲು ಸೇವೆ, ಸಮಾನ ಆಸಕ್ತರೊಡನೆ ಅಭ್ಯಾಸ ಮುಂತಾದ ಸಾಹಿತ್ಯ ಪರಿಚಾರಿಕೆಯ ಕೆಲಸಗಳಲ್ಲಿ ಆಸಕ್ತೆ. ಸ್ವಭಾವತಃ ತಿಂಡಿಪೋತಿಯಾದ್ದರಿಂದ ಅಟ್ಟುಣಿಸುವಲ್ಲೂಅಭಿರುಚಿಯಿದೆ! ಉಳಿದಂತೆ, ಜೀವನದ ಅಪಾರ ಸಾಧ್ಯತೆಗಳ ಬಗ್ಗೆ ತೀರದ ಕುತೂಹಲ ಮತ್ತು ಉತ್ಸಾಹ .
